ಸೈಟ್‌ನಲ್ಲಿ ಹುಡುಕಿ

ಪ್ರಸ್ತುತ ಭಾಷೆಯಲ್ಲಿ ಹುಡುಕಲು ಟೈಪ್ ಮಾಡಿ.

ಹೆಸರುಗಳು ಮತ್ತು ಸಂಖ್ಯೆಗಳಿಗಾಗಿ ಇಂಟರ್ನೆಟ್ ನಿಗಮ (ICANN)

ಹೆಸರುಗಳು ಮತ್ತು ಸಂಖ್ಯೆಗಳಿಗಾಗಿ ಇಂಟರ್ನೆಟ್ ನಿಗಮ (Internet Corporation for Assigned Names and Numbers)

ಹೆಸರುಗಳು ಮತ್ತು ಸಂಖ್ಯೆಗಳಿಗಾಗಿ ಇಂಟರ್ನೆಟ್ ನಿಗಮ (ICANN)

ಇವರು ಯಾರು?

  • ICANN 1998ರಲ್ಲಿ ಸ್ಥಾಪಿತವಾದ ಅಂತರರಾಷ್ಟ್ರೀಯ, ಲಾಭರಹಿತ ಸಾರ್ವಜನಿಕ ಹಿತಾಸಕ್ತಿ ಸಂಸ್ಥೆಯಾಗಿದೆ. ಸ್ಥಿರ, ಸುರಕ್ಷಿತ ಮತ್ತು ಏಕೀಕೃತ ಜಾಗತಿಕ ಇಂಟರ್ನೆಟ್ ಖಚಿತಪಡಿಸಲು ಸಹಾಯ ಮಾಡುವುದು ಇದರ ಉದ್ದೇಶ.

ಇವರು ಏಕೆ ಅಗತ್ಯ?

  • ಇಂಟರ್ನೆಟ್‌ನಲ್ಲಿರುವ ಮತ್ತೊಂದು ವ್ಯಕ್ತಿ, ಸಂಸ್ಥೆ ಅಥವಾ ಸರ್ವರ್‌ಗೆ ಸಂಪರ್ಕಿಸಲು ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್‌ನಲ್ಲಿ ಹೆಸರು ಅಥವಾ ಸಂಖ್ಯೆಯ ವಿಳಾಸವನ್ನು ನಮೂದಿಸಬೇಕು. ಆ ವಿಳಾಸ ಅನನ್ಯವಾಗಿದ್ದಾಗ ಮಾತ್ರ ಕಂಪ್ಯೂಟರ್‌ಗಳು ಪರಸ್ಪರ ಎಲ್ಲಿವೆ ಎಂದು ಗುರುತಿಸಬಹುದು. ವಿಶ್ವದ ಅನನ್ಯ ಗುರುತುಗಳನ್ನು ಸಂಯೋಜಿಸಲು ಮತ್ತು ಬೆಂಬಲಿಸಲು ICANN ಸಹಾಯ ಮಾಡುತ್ತದೆ.

ಈ ಸಂಸ್ಥೆಯ ಜವಾಬ್ದಾರಿ ಏನು?

  • ಇಂಟರ್ನೆಟ್‌ನ ಸ್ಥಿರತೆಯನ್ನು ಕಾಪಾಡುವುದು, ಸ್ಪರ್ಧೆಯನ್ನು ಉತ್ತೇಜಿಸುವುದು, ಜಾಗತಿಕ ಇಂಟರ್ನೆಟ್ ಸಮುದಾಯಗಳ ವ್ಯಾಪಕ ಪ್ರತಿನಿಧಿತ್ವವನ್ನು ಖಚಿತಪಡಿಸುವುದು ಮತ್ತು ಒಮ್ಮತ ಆಧಾರಿತ ಪ್ರಕ್ರಿಯೆಗಳ ಮೂಲಕ ಸೂಕ್ತ ನೀತಿಗಳನ್ನು ರೂಪಿಸುವುದು ಇದರ ಜವಾಬ್ದಾರಿ. ತಾಂತ್ರಿಕವಾಗಿ, ICANN IANA ಯ ಕಾರ್ಯಗಳನ್ನು ಸಂಯೋಜಿಸಲು ಸಹಾಯ ಮಾಡುತ್ತದೆ.