ಹೆಸರುಗಳು ಮತ್ತು ಸಂಖ್ಯೆಗಳಿಗಾಗಿ ಇಂಟರ್ನೆಟ್ ನಿಗಮ (Internet Corporation for Assigned Names and Numbers)



ಇವರು ಯಾರು?

  • ICANN 1998ರಲ್ಲಿ ಸ್ಥಾಪಿತವಾದ ಅಂತರರಾಷ್ಟ್ರೀಯ, ಲಾಭರಹಿತ ಸಾರ್ವಜನಿಕ ಹಿತಾಸಕ್ತಿ ಸಂಸ್ಥೆಯಾಗಿದೆ. ಸ್ಥಿರ, ಸುರಕ್ಷಿತ ಮತ್ತು ಏಕೀಕೃತ ಜಾಗತಿಕ ಇಂಟರ್ನೆಟ್ ಖಚಿತಪಡಿಸಲು ಸಹಾಯ ಮಾಡುವುದು ಇದರ ಉದ್ದೇಶ.

ಇವರು ಏಕೆ ಅಗತ್ಯ?

  • ಇಂಟರ್ನೆಟ್‌ನಲ್ಲಿರುವ ಮತ್ತೊಂದು ವ್ಯಕ್ತಿ, ಸಂಸ್ಥೆ ಅಥವಾ ಸರ್ವರ್‌ಗೆ ಸಂಪರ್ಕಿಸಲು ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್‌ನಲ್ಲಿ ಹೆಸರು ಅಥವಾ ಸಂಖ್ಯೆಯ ವಿಳಾಸವನ್ನು ನಮೂದಿಸಬೇಕು. ಆ ವಿಳಾಸ ಅನನ್ಯವಾಗಿದ್ದಾಗ ಮಾತ್ರ ಕಂಪ್ಯೂಟರ್‌ಗಳು ಪರಸ್ಪರ ಎಲ್ಲಿವೆ ಎಂದು ಗುರುತಿಸಬಹುದು. ವಿಶ್ವದ ಅನನ್ಯ ಗುರುತುಗಳನ್ನು ಸಂಯೋಜಿಸಲು ಮತ್ತು ಬೆಂಬಲಿಸಲು ICANN ಸಹಾಯ ಮಾಡುತ್ತದೆ.

ಈ ಸಂಸ್ಥೆಯ ಜವಾಬ್ದಾರಿ ಏನು?

  • ಇಂಟರ್ನೆಟ್‌ನ ಸ್ಥಿರತೆಯನ್ನು ಕಾಪಾಡುವುದು, ಸ್ಪರ್ಧೆಯನ್ನು ಉತ್ತೇಜಿಸುವುದು, ಜಾಗತಿಕ ಇಂಟರ್ನೆಟ್ ಸಮುದಾಯಗಳ ವ್ಯಾಪಕ ಪ್ರತಿನಿಧಿತ್ವವನ್ನು ಖಚಿತಪಡಿಸುವುದು ಮತ್ತು ಒಮ್ಮತ ಆಧಾರಿತ ಪ್ರಕ್ರಿಯೆಗಳ ಮೂಲಕ ಸೂಕ್ತ ನೀತಿಗಳನ್ನು ರೂಪಿಸುವುದು ಇದರ ಜವಾಬ್ದಾರಿ. ತಾಂತ್ರಿಕವಾಗಿ, ICANN IANA ಯ ಕಾರ್ಯಗಳನ್ನು ಸಂಯೋಜಿಸಲು ಸಹಾಯ ಮಾಡುತ್ತದೆ.