ಸುಂದರ್ ವೆಂಕಟೇಶ್‌ಗೆ ರಹಸ್ಯ ಸಂದೇಶ ಕಳುಹಿಸಲು ಬಯಸುತ್ತಾನೆ ಎಂದು ಊಹಿಸೋಣ. ದತ್ತಾಂಶ ಹಂಚುವ ಮೊದಲು ಸುಂದರ್ ಮತ್ತು ವೆಂಕಟೇಶ್ ಒಂದು ಯಾದೃಚ್ಛಿಕ ರಹಸ್ಯ ಸಂಕೇತವನ್ನು ಆಯ್ಕೆಮಾಡುತ್ತಾರೆ. ಇದನ್ನು ರಹಸ್ಯ ಕೀಲಿ ಎಂದು ಕರೆಯೋಣ. ಈ ರಹಸ್ಯ ಕೀಲಿಯನ್ನು ಬೇರೆ ಯಾರಿಗೂ ತಿಳಿದಿರುವುದಿಲ್ಲ.

ಸುಂದರ್ ಆಯ್ಕೆ ಮಾಡಿದ ಗೂಢಲಿಪೀಕರಣ ವಿಧಾನದಿಂದ ಸಂದೇಶವನ್ನು ಗೂಢಲಿಪೀಕರಿಸಿ, ಗೂಢಲಿಪಿ ಪಠ್ಯವನ್ನು ವೆಂಕಟೇಶ್‌ಗೆ ಕಳುಹಿಸುತ್ತಾನೆ. ವೆಂಕಟೇಶ್ ಅದೇ ರಹಸ್ಯ ಕೀಲಿಯನ್ನು ಬಳಸಿ ಗೂಢಲಿಪಿ ಪಠ್ಯವನ್ನು ಬಿಡಿಸಿ ಮೂಲ ಸಂದೇಶವನ್ನು ಪಡೆಯುತ್ತಾನೆ. ಗೂಢಲಿಪೀಕರಣ ಮತ್ತು ಗೂಢಲಿಪಿ ಬಿಡಿಸುವಿಕೆಗೆ ಒಂದೇ ಕೀಲಿಯನ್ನು ಬಳಸುವುದರಿಂದ ಇದನ್ನು ಸಮಮಿತಿ ಕೀಲಿ ಗೂಢಲಿಪೀಕರಣ ಎಂದು ಕರೆಯಲಾಗುತ್ತದೆ. ಇದನ್ನು ರಹಸ್ಯ ಕೀಲಿ ಗೂಢಲಿಪಿಶಾಸ್ತ್ರ ಎಂದೂ ಕರೆಯುತ್ತಾರೆ.