ಹ್ಯಾಶ್ ಮರ ಅಥವಾ ಮೆರ್ಕಲ್ ಮರವು ಮರದ ಆಕಾರದಲ್ಲಿರುವ ದತ್ತಾಂಶ ರಚನೆಯಾಗಿದೆ. ಇದರಲ್ಲಿ ಪ್ರತಿಯೊಂದು ಎಲೆ ನೋಡ್‌ನ್ನು ದತ್ತಾಂಶ ಸಮೂಹದ ಹ್ಯಾಶ್ ಮೌಲ್ಯದಿಂದ ಗುರುತಿಸಲಾಗುತ್ತದೆ. ಪ್ರತಿ ಎಲೆ ಅಲ್ಲದ ನೋಡ್‌ನ್ನು ಅದರ ಮಕ್ಕಳ ನೋಡ್‌ಗಳ ಹ್ಯಾಶ್ ಮೌಲ್ಯದಿಂದ ಗುರುತಿಸಲಾಗುತ್ತದೆ.

ಮೆರ್ಕಲ್ ಮರದ ಪರಿಕಲ್ಪನೆಗೆ ರಾಲ್ಫ್ ಮೆರ್ಕಲ್ ಅವರು 1979ರಲ್ಲಿ ಪೇಟೆಂಟ್ ಪಡೆದರು. ಆದ್ದರಿಂದ ಅವರ ಹೆಸರಿನಿಂದ ಇದನ್ನು ಮೆರ್ಕಲ್ ಮರ ಎಂದು ಕರೆಯಲಾಗುತ್ತದೆ. ಅವರು ಸಾರ್ವಜನಿಕ ಕೀಲಿ ಗೂಢಲಿಪಿಶಾಸ್ತ್ರದ ಪ್ರಮುಖ ಆವಿಷ್ಕಾರಕರಲ್ಲಿ ಒಬ್ಬರು ಮತ್ತು ಕ್ರಿಪ್ಟೋಗ್ರಾಫಿಕ್ ಹ್ಯಾಶ್‌ನ ಆವಿಷ್ಕಾರಕರಾಗಿದ್ದಾರೆ.