ಅಸಮಮಿತಿ ಕೀಲಿ ಗೂಢಲಿಪೀಕರಣ​
ಅಸಮಮಿತಿ ಕೀಲಿ ಗೂಢಲಿಪೀಕರಣ​

ಪ್ರತಿಯೊಬ್ಬರಿಗೂ ಎರಡು ಕೀಲಿಗಳಿರುತ್ತವೆ: ಸಾರ್ವಜನಿಕ ಕೀಲಿ ಮತ್ತು ಖಾಸಗಿ ಕೀಲಿ. ಇದನ್ನು ‘ಕೀಲಿ ಜೋಡಿ’ ಎಂದು ಕರೆಯಲಾಗುತ್ತದೆ. ​

ಕೀಲಿ ಜೋಡಿಯು ಗಣಿತೀಯವಾಗಿ ಪರಸ್ಪರ ಸಂಬಂಧಿತವಾಗಿರುತ್ತದೆ. ಒಂದು ಕೀಲಿಯನ್ನು ಇನ್ನೊಂದು ಕೀಲಿಯಿಂದ ಊಹಿಸಲು ಅಥವಾ ಪಡೆಯಲು ಸಾಧ್ಯವಿಲ್ಲ. ಒಂದು ಕೀಲಿಯನ್ನು ಗೂಢಲಿಪೀಕರಣಕ್ಕೆ ಬಳಸಿದರೆ, ಆ ಜೋಡಿಯಲ್ಲಿರುವ ಇನ್ನೊಂದು ಕೀಲಿಯನ್ನೇ ಗೂಢಲಿಪಿ ಬಿಡಿಸಲು ಬಳಸಬಹುದು. ಸಾರ್ವಜನಿಕ ಕೀಲಿಯನ್ನು ಇಂಟರ್ನೆಟ್, ಸಾಮಾಜಿಕ ಜಾಲತಾಣ ಅಥವಾ ಇಮೇಲ್‌ನಂತಹ ಸಾರ್ವಜನಿಕ ಸ್ಥಳಗಳಲ್ಲಿ ಹಂಚಬಹುದು. ಖಾಸಗಿ ಕೀಲಿ ಗೌಪ್ಯವಾಗಿರುವುದರಿಂದ ಅದನ್ನು ಅತ್ಯಂತ ಸುರಕ್ಷಿತವಾಗಿ ಇರಿಸಬೇಕು.

ಅಸಮಮಿತಿ ಕೀಲಿ ಗೂಢಲಿಪೀಕರಣ​
ಅಸಮಮಿತಿ ಕೀಲಿ ಗೂಢಲಿಪೀಕರಣ​

ಸುಂದರ್ ವೆಂಕಟೇಶ್‌ಗೆ ರಹಸ್ಯ ಸಂದೇಶ ಕಳುಹಿಸಲು ಬಯಸುತ್ತಾನೆ ಎಂದು ಊಹಿಸೋಣ. ಸುಂದರ್, ವೆಂಕಟೇಶ್‌ನ ಸಾರ್ವಜನಿಕ ಕೀಲಿಯಿಂದ ಸಂದೇಶವನ್ನು ಗೂಢಲಿಪೀಕರಿಸಿ, ಗೂಢಲಿಪಿ ಪಠ್ಯವನ್ನು ವೆಂಕಟೇಶ್‌ಗೆ ಕಳುಹಿಸುತ್ತಾನೆ. ಕೀಲಿ ಜೋಡಿ ಗಣಿತೀಯವಾಗಿ ಸಂಬಂಧಿತವಾಗಿರುವುದರಿಂದ ವೆಂಕಟೇಶ್‌ನ ಖಾಸಗಿ ಕೀಲಿಯಿಂದ ಮಾತ್ರ ಸಂದೇಶವನ್ನು ಗೂಢಲಿಪಿ ಬಿಡಿಸಬಹುದು. ಬೇರೆ ಯಾವುದೇ ಕೀಲಿಯಿಂದ ಈ ಸಂದೇಶವನ್ನು ಬಿಡಿಸಲಾಗುವುದಿಲ್ಲ. ವೆಂಕಟೇಶ್ ತನ್ನ ಖಾಸಗಿ ಕೀಲಿಯನ್ನು ಬಳಸಿ ಮೂಲ ಮಾಹಿತಿಯನ್ನು ಪಡೆಯುತ್ತಾನೆ. ಗೂಢಲಿಪೀಕರಣ ಮತ್ತು ಗೂಢಲಿಪಿ ಬಿಡಿಸುವಿಕೆಗೆ ಎರಡು ಕೀಲಿಗಳನ್ನು ಬಳಸುವುದರಿಂದ ಇದನ್ನು ಅಸಮಮಿತಿ ಕೀಲಿ ಗೂಢಲಿಪೀಕರಣ ಎಂದು ಕರೆಯಲಾಗುತ್ತದೆ. ಸುರಕ್ಷಿತ ಸಂವಹನಕ್ಕಾಗಿ ಸಾರ್ವಜನಿಕ ಕೀಲಿಯನ್ನು ಹಂಚುವುದರಿಂದ ಇದನ್ನು ಸಾರ್ವಜನಿಕ ಕೀಲಿ ಗೂಢಲಿಪಿಶಾಸ್ತ್ರ ಎಂದೂ ಕರೆಯುತ್ತಾರೆ.